calendar_today 24 Nov 2026 | thermostat
UK19 News
UK19 ನ್ಯೂಸ್

ನಿಖರ ಸುದ್ದಿಯೊಂದಿಗೆ

R TECHUB - Custom Website Development Header
bolt ಬ್ರೇಕಿಂಗ್
ಬೆಳಗಾವಿ: ಸುವರ್ಣ ಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಆರಂಭ• ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆ ಮುನ್ಸೂಚನೆ• ಬೆಳಗಾವಿ ನಗರ ರಿಂಗ್ ರಸ್ತೆ ಕಾಮಗಾರಿಗೆ ₹450 ಕೋಟಿ ಅನುಮೋದನೆ•

ಹುಕ್ಕೇರಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸರ ಕಳವು ಪ್ರಕರಣ; ಇಬ್ಬರು ಖದೀಮರ ಬಂಧನ, 3.20 ಲಕ್ಷ ಮೌಲ್ಯದ ಸೊತ್ತು ಜಪ್ತಿ

ಹುಕ್ಕೇರಿ ತಾಲೂಕಿನ ಶಿರಗಾಂವದಲ್ಲಿ ಮಹಿಳೆಯ ಚಿನ್ನದ ಸರ ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ ಬಂಗಾರ ಹಾಗೂ ಬೈಕ್ ಸೇರಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಜಪ್ತಿ ಮಾಡಿದ್ದಾರೆ.

U
ಬರೆದವರು: UK19 News Desk
schedule October 11, 2026 visibility 37 ವೀಕ್ಷಣೆಗಳು

ಈ ಲೇಖನವನ್ನು ಆಲಿಸಿ TTS AI

2 ನಿಮಿಷಗಳ ಓದು • 211 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಹುಕ್ಕೇರಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸರ ಕಳವು ಪ್ರಕರಣ; ಇಬ್ಬರು ಖದೀಮರ ಬಂಧನ, 3.20 ಲಕ್ಷ ಮೌಲ್ಯದ ಸೊತ್ತು ಜಪ್ತಿ
ಹುಕ್ಕೇರಿ: ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಹುಕ್ಕೇರಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ್ದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳು ಸೇರಿದಂತೆ ಒಟ್ಟು 3.20 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ದುಪದಾಳ ಗ್ರಾಮದ ನಿವಾಸಿಗಳಾದ ಪ್ರಹ್ಲಾದ ಕಲಂದರ್ ಮಹಿಲಾಂದೆ (21) ಹಾಗೂ ರಾಜ ಕಲಂದರ್ ಮಹಿಲಾಂದೆ (18) ಎಂದು ಗುರುತಿಸಲಾಗಿದೆ. ಶಿರಗಾಂವ ಗ್ರಾಮದ ನಿವಾಸಿ ಕಾಶವ್ವ ನಿಡಸೋಸಿ ಎಂಬುವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿಗಳು ಅವರ ಕೊರಳಲ್ಲಿದ್ದ 70 ಸಾವಿರ ರೂಪಾಯಿ ಮೌಲ್ಯದ 5 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಕಾಲ್ಕಿತ್ತಿದ್ದರು. ಸರಣಿ ಕಳವು ಕೃತ್ಯಗಳ ಬಣ್ಣ ಬಯಲು: ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆರೋಪಿಗಳಿಂದ ಕಾಶವ್ವ ಅವರ ಚಿನ್ನದ ಸರವಲ್ಲದೆ, ಕೃತ್ಯ ನಡೆಸಲು ಬಳಸಿದ್ದ 2 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪೊಲೀಸರ ಕಠಿಣ ವಿಚಾರಣೆ ವೇಳೆ ಆರೋಪಿಗಳು ತಮ್ಮ ಇತರ ಕಳವು ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ 1.50 ಲಕ್ಷ ರೂಪಾಯಿ ಮೌಲ್ಯದ 10 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಮದಿಹಳ್ಳಿ ಗ್ರಾಮದಲ್ಲಿ ಬೈಕ್ ಕಳವು ಮಾಡಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. blockquote>"ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಮಹಿಳೆಯರ ಭದ್ರತೆಗೆ ಧಕ್ಕೆ ತರುವ ಇಂತಹ ಅಪರಾಧಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಂಧಿತರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ." - ಹುಕ್ಕೇರಿ ಪೊಲೀಸ್ ತನಿಖಾ ತಂಡ
label ಟ್ಯಾಗ್ಗಳು: #Hukkeri news
share ಸುದ್ದಿ ಹಂಚಿಕೊಳ್ಳಿ
WhatsApp Facebook X

ಸಂಬಂಧಿತ ಸುದ್ದಿಗಳು

ಬೆಂಗಳೂರಿಗರಿಗೆ ಲಾಕ್ ಡೌನ್ ಕಲಿಸಿದ ಪಾಠ

ಬೆಂಗಳೂರಿಗರಿಗೆ ಲಾಕ್ ಡೌನ್ ಕಲಿಸಿದ ಪಾಠ

2026-09-12
ಮುಂದಿನ ಅಧಿವೇಶನದಲ್ಲಿ ಹೊಸ ಮೋಟಾರು ಕಾಯ್ದೆ

ಮುಂದಿನ ಅಧಿವೇಶನದಲ್ಲಿ ಹೊಸ ಮೋಟಾರು ಕಾಯ್ದೆ

2026-09-12
Ground Reality of Belagavi Smart City Projects

Ground Reality of Belagavi Smart City Projects

August 7, 2019
ಸುದ್ದಿ ಕಳುಹಿಸಿ