calendar_today 24 Nov 2026 | thermostat
UK19 News
UK19 ನ್ಯೂಸ್

ನಿಖರ ಸುದ್ದಿಯೊಂದಿಗೆ

R TECHUB - Custom Website Development Header
bolt ಬ್ರೇಕಿಂಗ್
ಬೆಳಗಾವಿ: ಸುವರ್ಣ ಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಆರಂಭ• ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆ ಮುನ್ಸೂಚನೆ• ಬೆಳಗಾವಿ ನಗರ ರಿಂಗ್ ರಸ್ತೆ ಕಾಮಗಾರಿಗೆ ₹450 ಕೋಟಿ ಅನುಮೋದನೆ•

ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆಗೆ ಆಗ್ರಹ: ಹತ್ತರಗಿ ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ

ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸಂಕೇಶ್ವರದ ಹತ್ತರಗಿ ಟೋಲ್ ಬಳಿ ರೈತರು ಅಹೋರಾತ್ರಿ ಧರಣಿ ಹಾಗೂ ಉಗ್ರ ಪ್ರತಿಭಟನೆ ಮುಂದುವರೆಸಿದ್ದಾರೆ.

U
ಬರೆದವರು: UK19 News Desk
schedule October 13, 2026 visibility 30 ವೀಕ್ಷಣೆಗಳು

ಈ ಲೇಖನವನ್ನು ಆಲಿಸಿ TTS AI

2 ನಿಮಿಷಗಳ ಓದು • 255 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಕಬ್ಬಿಗೆ ಪ್ರತಿ ಟನ್‌ಗೆ ₹5500 ಬೆಲೆಗೆ ಆಗ್ರಹ: ಹತ್ತರಗಿ ಟೋಲ್ ಬಳಿ ರೈತರ ಉಗ್ರ ಪ್ರತಿಭಟನೆ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ
ಸಂಕೇಶ್ವರ: ಹತ್ತರಗಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ 48ನ್ನು ಬಂದ್ ಮಾಡಿ ಕಬ್ಬು ಬೆಳೆಗಾರರು ತೀವ್ರ ಅಹೋರಾತ್ರಿ ಧರಣಿ ಹಾಗೂ ಉಗ್ರ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ₹5500 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿರುವ ರೈತರು, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ರೈತ ಮುಖಂಡ ಚೂನಪ್ಪಾ ಪೂಜಾರಿ, ತಿಂಗಳ ಹಿಂದೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು. ಸಚಿವರು ಈಗ ಮತ್ತೆ ಸಮಯಾವಕಾಶ ಕೋರುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಆಪಾದಿಸಿದರು. ಪ್ರಧಾನಿ ನರೇಂದ್ರ ಮೋದಿ ನೇರ ಮಧ್ಯಸ್ಥಿಕೆಗೆ ಒತ್ತಾಯ: ಕೃಷಿ ಪರಿಕರಗಳ ಬೆಲೆ ಗಗನಕ್ಕೇರಿರುವುದನ್ನು ಪ್ರಸ್ತಾಪಿಸಿದ ಚೂನಪ್ಪಾ ಪೂಜಾರಿ, ಕೃಷಿ ಬೀಜಗಳು, ರಸಗೊಬ್ಬರ, ಕೀಟನಾಶಕಗಳು ಹಾಗೂ ಕೃಷಿ ಕಾರ್ಮಿಕರ ಕೂಲಿ ಕಳೆದ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಸಕ್ಕರೆ ದರ ಮಾತ್ರ ಹೆಚ್ಚಳವಾಗಿಲ್ಲ ಎಂದು ಅಳಲು ತೋಡಿಕೊಂಡರು. ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ₹5500 ಬೆಲೆ ಘೋಷಿಸಿ ಇಲ್ಲವೇ ನಮಗೆ ಗುಂಡು ಹಾಕಿ. ಕೇಂದ್ರ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವವರೆಗೆ ನಮ್ಮ ಅಹೋರಾತ್ರಿ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ - ಚೂನಪ್ಪಾ ಪೂಜಾರಿ, ರೈತ ಮುಖಂಡ
ಪ್ರಮುಖ ಬೇಡಿಕೆಗಳು ಮತ್ತು ಹಸಿರು ಸೇನೆ ಎಚ್ಚರಿಕೆ: ಪ್ರತಿಭಟನೆಯಲ್ಲಿ ಮಾತನಾಡಿದ ಹಸಿರು ಸೇನೆಯ ಅಧ್ಯಕ್ಷ ಶಶಿಕಾಂತ ಗುರುಜಿ, ಹತ್ತರಗಿ ಟೋಲ್ ನಾಕಾದಲ್ಲಿ ಆರಂಭವಾಗಿರುವ ಈ ಹೋರಾಟ ಕೇವಲ ಸಾಂಕೇತಿಕವಲ್ಲ. ರೈತರ ಸಂಪೂರ್ಣ ಬೇಡಿಕೆಗಳು ಈಡೇರುವವರೆಗೂ ಈ ಕದನ ವಿರಾಮವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕಾರ್ಖಾನೆಗಳು ಉತ್ಪಾದಿಸುವ ಇಥೆನಾಲ್ ಖರೀದಿ, ವಿದ್ಯುತ್‌ಗೆ ಸರಿಯಾದ ದರ ಮತ್ತು ಸ್ವಾಮಿನಾಥನ್ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಬೃಹತ್ ಪ್ರತಿಭಟನೆಯಲ್ಲಿ ಮಲ್ಲಪ್ಪಾ ಅಂಗಡಿ, ಸಂಜೀವ ಹಾವನ್ನವರ, ಮಲ್ಲಪ್ಪಾ ಬೈಲನ್ನವರ, ಸಿದ್ದಪ್ಪಾ ನಾಯಿಕ, ಮಲ್ಲಪ್ಪಾ ತೊದಲೆ, ಶ್ರೀಶೈಲ ಅಂಗಡಿ ಹಾಗೂ ಪ್ರೇಮಾ ಚೌಗಲಾ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಮತ್ತು ಕಬ್ಬು ಬೆಳೆಗಾರರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
share ಸುದ್ದಿ ಹಂಚಿಕೊಳ್ಳಿ
WhatsApp Facebook X

ಸಂಬಂಧಿತ ಸುದ್ದಿಗಳು

Test Article for Redirect Test

Test Article for Redirect Test

August 7, 2019
ದೆಹಲಿಯಲ್ಲಿ ಹೈ ಅಲರ್ಟ್: 24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ಸ್ಟೇಷನ್ ಬಂದ್

ದೆಹಲಿಯಲ್ಲಿ ಹೈ ಅಲರ್ಟ್: 24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ಸ್ಟೇಷನ್ ಬಂದ್

October 9, 2026
ಕರ್ನಾಟಕದಲ್ಲಿ ನಾಳೆ ರಾಜ್ಯವ್ಯಾಪಿ ರೈತ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

ಕರ್ನಾಟಕದಲ್ಲಿ ನಾಳೆ ರಾಜ್ಯವ್ಯಾಪಿ ರೈತ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

October 12, 2026
ಸುದ್ದಿ ಕಳುಹಿಸಿ